ಸಂಸ್ಥೆ


ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ 861 ಅಧಿಕಾರಿ/ಸಿಬ್ಬಂದಿ/ಕಾರ್ಮಿಕರನ್ನ ಹೊಂದಿದ್ದು, ರಾಜ್ಯದ ಪ್ರಮುಖ ಗಣಿಗಾರಿಕೆ ಉದ್ಯಮವಾಗಿದೆ. ಅದಿರು ಗಣಿಗಾರಿಕೆ ಮತ್ತು ಶಿಲಾ ಗಣಿಕಾರಿಕೆಯೊಂದಿಗೆ ಕೆಎಸ್‍ಎಂಸಿಎಲ್ ಹಾಸನ ಜಿಲ್ಲೆಯ ಬಾಗೇಶಪುರದಲ್ಲಿ ಸ್ಟೋನ್ ವೇರ್ ಪೈಪ್ ಕಾರ್ಖಾನೆ ಮತ್ತು ಶೇ.100 ರಫ್ತು ಉದ್ದೇಶಿತ ಗ್ರೈನೈಟ್ ಕತ್ತರಿಸುವ ಹಾಗು ಹೊಳಪು ನೀಡುವ ಘಟಕವನ್ನ ಹಾಸನದಲ್ಲಿ ಹೊಂದಿರುತ್ತದೆ. (ಪ್ರಸ್ತುತ ಕಾರ್ಯ ನಿರ್ವಹಿಸುತ್ತಿಲ್ಲ)
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಈ ಕೆಳಕಂಡ ಅದಿರು ಗಣಿಗಾರಿಕೆ ಮತ್ತು ಶಿಲಾ ಗಣಿಕಾರಿಕೆನ್ನ ಹೊಂದಿದೆ.
• ಕ್ರೋಮೈಟ್
• ಕಬ್ಬಿಣದ ಅದಿರು
• ಸುಣ್ಣದ ಕಲ್ಲು
• ಡಾಲಮೈಟ್
• ಮ್ಯಾಗ್ನೆಸೈಟ್
• ಚೀನಾ ಕ್ಲೇ
• ಅಲ್ಯುಮಿನಸ್ ಕ್ಲೇ
• ಕ್ವಾಡ್ಜ್
• ಫೆಲ್ಡ್ಸ್ ರ್ನಿಂದ
• ಬಾಕ್ಸೈಟ್
• ಡ್ಯೂನೈಟ್
• ಮ್ಯಾಂಗನೀಸ್ (ಎಫ್ಸಿ ಕಾಯಿದೆಯ ಖಾತೆಯನ್ನು ಮುಚ್ಚಲಾಗಿದೆ, 1980)

ಅಂತೆಯೇ, ಕೆಳಗಿನ ಕೆ.ಎಸ್.ಎಂ.ಸಿ.ಎಲ್ ನಿರ್ಮಾಣದ ಪ್ರಮುಖ ಬಣ್ಣದ ಗ್ರಾನೈಟ್‍ಗಳು ಇವೆ.
• ರೂಬಿ ರೆಡ್(ಇಳಕಲ್)
• ಫಿಶ್ ಬೆಲ್ಲಿ (ಮುದ್ಗಲ್)
• ಮಲ್ಟಿಕಲ್ಲರ್ (ಕನಕಪುರ)
• ಜುಪ್ರಾನ (ಕನಕಪುರ)
• ಹಾಸನ ಗ್ರಾನೈಟ್ (ಚಾಮರಾಜನಗರ ಮತ್ತು ಕನಕಪುರ)
• ಚಾಕೊಲೇಟ್ ಬ್ರೌನ್ (ಬಾದನಹಟ್ಟಿ)
• ಪಿಂಕ್ ಪ್ಯಾಂಥರ್ (ಕೊಪ್ಪಳ)

ಪ್ರಸ್ತುತ ಕಂಪನಿಯ ಆರ್ಥಿಕ ಪರಿಸ್ಥಿತಿ, ಅದರ ಅಂತರ್ಗತ ತಾಂತ್ರಿಕ ವಿವರಗಳು, ಅನುಷ್ಠಾನ, ತಂತ್ರಗಾರಿಕೆ ಮತ್ತು ಉತ್ತಮ ಆಡಳಿತ ಹಾಗು ಖನಿಜ & ಶಿಲಾ ದಿಮ್ಮಿಗಳ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಾಗಿರುತ್ತದೆ.

ಸಂಸ್ಥೆಯ ಸಂಕ್ಷಿಪ್ತ ವಿವರಣೆ
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್, ಕರ್ನಾಟಕ ಸರ್ಕಾರದ ಗಣಿ ಕಾಯ್ದೆ 1966 ರಲ್ಲಿ ಬೋರ್ಡ ಆಫ್ ಮಿನರಲ್ ಡೆವಲಪಮೆಂಟ್ ಮರು ನಾಮ ಹೊಂದಿರುತ್ತದೆ. ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಖನಿಜ ಸಂಪತ್ತು ಹೇರಳವಾಗಿದ್ದು, ಸ್ಥಳಿಯ ಕ್ಯಗಾರಿಕೆ ಮತ್ತು ಸ್ಥಳಿಯ ಉದ್ಯೋಗ ಅವಕಾಶಗಳನ್ನ ಕಲ್ಪಿಸಿಕೊಡುವುದು ಮೂಲ ಉದ್ದೇಶವಾಗಿರುತ್ತದೆ.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಂಶ್ಥೆಯು ಗಣಿಗಾರಿಕೆಯನ್ನ ವೈಜ್ಞಾನಿಕವಾಗಿ ಮತ್ತು ಪರಿಸರಕ್ಕೆ ಹನಿ ಮಾಡದೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಉತ್ಪಾದನೆಯನ್ನ ಮಾಡುತ್ತದೆ.
ಪ್ರಸ್ತುತ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು 40 ಗಣಿ ಗುತ್ತಿಗೆಯನ್ನ ಹೊಂದಿದು, 5377.83 ಹೆಕ್ಟೇರ್ ಮತ್ತು 38 ಕಲ್ಲು ಗಣಿ ಗುತ್ತಿಗೆಯನ್ನ ಹೊಂದಿದ್ದು, 294.30 ಎಕ್ಕರೆ ಪ್ರದೇಶದಲ್ಲಿ ಗುತ್ತಿಗೆಯನ್ನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಂದಿರುತ್ತದೆ.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಗಣಿಗಾರಿಕೆಯಲ್ಲಿ ತನ್ನದೇ ಆದ ಹೆಸರನ್ನ ಮೂಡಿಸಿದೆ. ಅಲ್ಲದೇ ವೈಜ್ಞಾನಿಕ ವಿಧಾನಗಳನ್ನ ಬಳಸಿ ಗಣಿಕಾರಿಕೆಯನ್ನ ಮಾಡುವುದರ ಜೊತೆಗೆ ನೈಸರ್ಗಿಕ ಸಮತೋಲನವನ್ನ ಕಾಪಾಡಿಕೊಂಡು ಕರ್ನಾಟಕ ರಾಜ್ಯದಲ್ಲಿಯೇ ಗಣಿಗಾರಿಕೆಯಲ್ಲಿ ಹೆಚ್ಚಿನ ಪಾತ್ರವನ್ನ ವಹಿಸುವುದರ ಜೊತೆಗೆ ಸ್ಥಳಿಯ , ರಾಷ್ರೀಯ , ಅಂತರಾಷ್ರೀಯ ಮಟ್ಟದಲ್ಲಿ ಹೆಸರನ್ನ ಮಾಡಿರುತ್ತದೆ.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯು 2004-05 ರ ಸಾಲಿನಲ್ಲಿ ರೂ. 111.184 ಕೋಟಿ 2005-06 ರ ಸಾಲಿನಲ್ಲಿ ರೂ. 197.100 ಕೋಟಿ 2006-07 ರ ಸಾಲಿನಲ್ಲಿ ರೂ. 172.77 ಕೋಟಿ 2007-08 ರ ಸಾಲಿನಲ್ಲಿ 334.966 ಕೋಟಿ 2008-09 ರಲ್ಲಿ ರೂ. 268.316 ಕೋಟಿ ಹಾಗೂ 2009-10 ರಲ್ಲಿ ರೂ. 306.660 ಕೋಟಿಗಳಷ್ಟು ವಹಿವಾಟು ಮಾಡಿರುತ್ತದೆ.
ಸಂಸ್ಥೆಯು ಪ್ರತಿ ವರ್ಷ ಗಣಿ ಸಿಬ್ಬಂದಿ ಮತ್ತು ಅಧಿಕಾರಿರವರಿಗೆ ಗಣಿ ನಿಯಮಗಳಡಿ ತರಬೇತಿಯನ್ನ ನೀಡಲಾಗುತ್ತದೆ.
ಮೇಲ್ಕಾಣಿಸಿದ ಖನಿಜ ಮತ್ತು ಶಿಲಾ ದಿಮ್ಮಿಗಳನ್ನ ಮಾರಾಟ ಮಾಡಿ ಸಂಸ್ಥೆಯು ಲಾಭದಾಯಕವಾಗಿರುತ್ತದೆ.