ಸ್ವಾಗತ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ (ಕೆ.ಎಸ್.ಎಂ.ಸಿ.ಎಲ್) (ಹಿಂದಿನ ಹೆಸರು ಮೈಸೂರು ಮಿನರಲ್ಸ್ ಲಿಮಿಟೆಡ್) ಗಣಿಗಾರಿಕೆ ಕ್ಷೇತ್ರದಲ್ಲಿ ಮುಖ್ಯ ಪಾತ್ರವಹಿಸಿದ್ದು, ಪ್ರಮುಖವಾಗಿ ಹಲವಾರು ಖನಿಜ ಸಂಪತ್ತನ್ನು ಹೊಂದಿರುತ್ತದೆ.ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ 1966 ರ ಸಾಲಿನಿಂದ ಇಂದಿನವರೆಗೂ ಗಣಿಗಾರಿಕೆಯಲ್ಲಿ ತನ್ನದೇ ಆದ ಹೆಸರನ್ನ ಮೂಡಿಸಿದೆ. ಅಲ್ಲದೇ ವೈಜ್ಞಾನಿಕ ವಿಧಾನಗಳನ್ನ ಬಳಸಿ ಗಣಿಕಾರಿಕೆಯನ್ನ  ಮಾಡುವುದರ ಜೊತೆಗೆ ನೈಸರ್ಗಿಕ ಸಮತೋಲನವನ್ನ ಕಾಪಾಡಿಕೊಂಡು ಕರ್ನಾಟಕ ರಾಜ್ಯದಲ್ಲಿಯೇ ಗಣಿಗಾರಿಕೆಯಲ್ಲಿ ಹೆಚ್ಚಿನ ಪಾತ್ರವನ್ನ ವಹಿಸುವುದರ ಜೊತೆಗೆ ಸ್ಥಳಿಯ , ರಾಷ್ರೀಯ , ಅಂತರಾರ್ಷಿಯ ಮಟ್ಟದಲ್ಲಿ ಹೆಸರನ್ನ ಮಾಡಿರುತ್ತದೆ.

ಕರ್ನಾಟಕ ರಾಜ್ಯ ಹೆಚ್ಚಿನ ಶಿಲಾ ಅದಿರು ನಿಕ್ಷೇಪಗಳನ್ನ ಹೊಂದಿದ್ದು, ಪ್ರೇಕ್ಷಣಿಯ ಸ್ಥಳಗಳಾದ ಹಂಪಿ ಮತ್ತು ಶ್ರವಣಬೆಳಗೊಳದ ಶಿಲಾ ಕೆತ್ತನೆಗೆ ಹಲವಾರು ಶಿಲಾ ಗಣಿಗಳ ಶಿಲೆಗಳನ್ನ ಬಳಸಲಾಗಿರುತ್ತದೆ. ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಹೇರಳವಾಗಿ ಶಿಲಾ ಅದಿರು ನಿಕ್ಷೇಪಗಳಿದ್ದು, ಶಿಲಾ ದಿಮ್ಮೆಗಳನ್ನ ಬಳಸಿಕೊಂಡು ಗುಡಿ ಕೈಗಾರಿಕೆ ಕ್ಷೇತ್ರದಲ್ಲಿ ಹಲವಾರು ಆಕೃತಿಗಳ ಕೆತ್ತೆನೆ ಮಾಡಿ ತನ್ನದೇ ಆದ ರೂಪಕೊಟ್ಟು ರಾಜ್ಯ, ರಾಷ್ರೀಯ, ಅಂತರಾರ್ಷಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆಯನ್ನ ಉಳಿಸಿಕೊಂಡಿದೆ.